Monday, 9 November 2026 — Prajabharat
BREAKING NEWS
ಬೆಂಗಳೂರು ನಗರ ದೀಪಾವಳಿ ವಿಶೇಷ: ಪರಮ್ ಫೌಂಡೇಶನ್‌ನಿಂದ ಲೇಸರ್ ಪ್ರೊಜೆಕ್ಷನ್ ಅನುಭವ. ಬೆಂಗಳೂರು ನಗರ ಶಾಸಕ‌ ಬೈರತಿ ಬಸವರಾಜ ವಿರುದ್ದ ಕೈ ಕಾರ್ಯಕರ್ತರ ಪ್ರತಿಭಟನೆ. ಬೆಂಗಳೂರು ನಗರ ಶಾಸಕ ಬೈರತಿ ಬಸವರಾಜಗೆ ನಿಂದನೆ ಕೆ ಆರ್ ಪುರದಲ್ಲಿ ಬುಗಿಲೆದ್ದ ಆಕ್ರೋಶ.ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. ಬೆಂಗಳೂರು ನಗರ ಸಚಿವ ಕೃಷ್ಣಬೈರೇಗೌಡ ಎದುರಲ್ಲೇ ಶಾಸಕ ಬೈರತಿ ಬಸವರಾಜ್-ಮಾಜಿ ಶಾಸಕ ನಾರಾಯಣಸ್ವಾಮಿ ನಡುವೆ ವಾಗ್ವಾದ. ಬೆಂಗಳೂರು ನಗರ ಟ್ರಿಫೆಕ್ಟಾ ಎಸ್ಪ್ಲನೇಡ್‌ನಲ್ಲಿ ಸಂಭ್ರಮದ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಬೆಂಗಳೂರು ನಗರ ಕ್ಯಾಪಿಟಲ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ದೇಶ ವಿದೇಶಗಳ ಪರಿಚಯ. ಬೆಂಗಳೂರು ನಗರ ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಳ;ನಂದಿನಿ’ ಟೋನ್ಡ್ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ : ಕೆಎಂಎಫ್ ಆದೇಶ ದೊಡ್ಡಬಳ್ಳಾಪುರ 71ನೇ ಕನ್ನಡ ರಾಜ್ಯೋತ್ಸವ ಕಲರವ,ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ:ಸಚಿವ ಮುನಿಯಪ್ಪ. ಬೆಂಗಳೂರು ನಗರ ದೀಪಾವಳಿ ವಿಶೇಷ: ಪರಮ್ ಫೌಂಡೇಶನ್‌ನಿಂದ ಲೇಸರ್ ಪ್ರೊಜೆಕ್ಷನ್ ಅನುಭವ. ಬೆಂಗಳೂರು ನಗರ ಶಾಸಕ‌ ಬೈರತಿ ಬಸವರಾಜ ವಿರುದ್ದ ಕೈ ಕಾರ್ಯಕರ್ತರ ಪ್ರತಿಭಟನೆ. ಬೆಂಗಳೂರು ನಗರ ಶಾಸಕ ಬೈರತಿ ಬಸವರಾಜಗೆ ನಿಂದನೆ ಕೆ ಆರ್ ಪುರದಲ್ಲಿ ಬುಗಿಲೆದ್ದ ಆಕ್ರೋಶ.ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. ಬೆಂಗಳೂರು ನಗರ ಸಚಿವ ಕೃಷ್ಣಬೈರೇಗೌಡ ಎದುರಲ್ಲೇ ಶಾಸಕ ಬೈರತಿ ಬಸವರಾಜ್-ಮಾಜಿ ಶಾಸಕ ನಾರಾಯಣಸ್ವಾಮಿ ನಡುವೆ ವಾಗ್ವಾದ. ಬೆಂಗಳೂರು ನಗರ ಟ್ರಿಫೆಕ್ಟಾ ಎಸ್ಪ್ಲನೇಡ್‌ನಲ್ಲಿ ಸಂಭ್ರಮದ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಬೆಂಗಳೂರು ನಗರ ಕ್ಯಾಪಿಟಲ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ದೇಶ ವಿದೇಶಗಳ ಪರಿಚಯ. ಬೆಂಗಳೂರು ನಗರ ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಳ;ನಂದಿನಿ’ ಟೋನ್ಡ್ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ : ಕೆಎಂಎಫ್ ಆದೇಶ ದೊಡ್ಡಬಳ್ಳಾಪುರ 71ನೇ ಕನ್ನಡ ರಾಜ್ಯೋತ್ಸವ ಕಲರವ,ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ:ಸಚಿವ ಮುನಿಯಪ್ಪ.
ಬೆಂಗಳೂರು ನಗರ

ಶಾಸಕ‌ ಬೈರತಿ ಬಸವರಾಜ ವಿರುದ್ದ ಕೈ ಕಾರ್ಯಕರ್ತರ ಪ್ರತಿಭಟನೆ.

Dharmaraju
ವರದಿ: Dharmaraju ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು

ಕೆ.ಆರ್ ಪುರ: ಸಚಿವ ಕೃಷ್ಣಭೈರೇಗೌಡರ ಮುಂದೆ ನಡೆದಿದ್ದ ಶಾಸಕ ಬೈರತಿ ಹಾಗೂ ಮಾಜಿ ಶಾಸಕ ನಾರಾಯಣಸ್ವಾಮಿ ನಡುವಿನ ವಾಗ್ವಾದದಲ್ಲಿ ಕಾಂಗ್ರೆಸ್ ಮುಖಂಡರಿಗೆ ಶಾಸಕ‌ ಬೈರತಿ ಬಸವರಾಜ ನಿಂದನೆ ಮಾಡಿದ್ದು,ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಎಂ. ಮಂಜುನಾಥ ಅವರು ಮಾಜಿ ಶಾಸಕರಾದ ನಾರಾಯಣಸ್ವಾಮಿ ಅವರಿಗೆ ಏಕವಚನದಲ್ಲಿ ನಿಂದನೆ ಮಾಡಿರುವುದು ಖಂಡನೀಯ ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನುಡಿದರು.

ನಮ್ಮ ನಾಯಕರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ಮಾಡಲಾಗಿದೆ ಕಾಂಗ್ರೆಸ್ ಕಾರ್ಯಕರ್ತರನ್ನು ಗುಂಡಾಗಳು ಎಂದು ಹೇಳಿರುವುದು ಖಂಡನೀಯ ಎಂದು ಹೇಳಿದರು.

ಕಳೆದ 15 ವರ್ಷ ಗಳಿಂದ ಶಾಸಕರಾಗಿ,ಸಚಿವರಾಗಿದ್ದ ಅವರು ಕ್ಷೇತ್ರಕ್ಕೆ ಸುಮಾರು 3 ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದಾರೆ.ಆ ದುಡ್ಡು ಏನಾಯಿತು,ಕ್ಷೇತ್ರದಲ್ಲಿ ಯಾವುದಾದರೂ ಒಂದು ಶಾಶ್ವತ ಯೋಜನೆ ಮಾಡಿದ್ದಾರ ಎಂದು ಪ್ರಶ್ನೆ ಮಾಡಿದರು.ಶಾಸಕರಾಗಿ ವರ್ಷ ಪೂರ್ತಿ ರಸ್ತೆಗಳಿಗೆ ಥಾರ್ ಹಾಕಿಸುವ ಕೆಲಸ ಬಿಟ್ಟರೆ ಯಾವುದು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬೈರತಿ ಬಸವರಾಜ ಅವರು ಯಾವುದೇ ಶಾಶ್ವತ ಕಾಮಗಾರಿ ಮಾಡಿಲ್ಲ, ಸಚಿವರಾದ ಸಂದರ್ಭದಲ್ಲೂ ಸಹ ಯಾವುದೇ ಕಾಮಗಾರಿ ಮಾಡದೇ ಇರುವುದು ಶಾಸಕ ಸ್ಥಾನಕ್ಕೆ ಮಾಡಿರುವ ಅಪಮಾನ,ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊದಂಡರಾಮ,ಸಿ.ವೆಂಕಟೇಶ್,
ಗ್ಯಾರಂಟಿ ಅಧ್ಯಕ್ಷ ಜಯರಾಮ್,ಯುವಘಟಕದ ಕ್ರೀಡಾ ಹಾಗೂ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಭರತ್ ಯಾದವ್ ಮುಖಂಡರಾದ ಅಗರ ಪ್ರಕಾಶ್,ಜಯಂತಿಗರ ಮುನಿರಾಜು, ಪ್ರಸನ್ನ, ಖಲೀವುಲ್ಲಾ,ಶೈಲಾಜಾ ಪಟೇಲ್ ಇದ್ದರು.

ಮುಖ್ಯ ಸಂಪಾದಕರು (Chief Editor) ✍️ 312 ಲೇಖನಗಳು

Dharmaraju

Dharmaraju ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment