Tuesday, June 9, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ; ಇಂದಿನಿಂದ ಒಂದು ವಾರ ನಗರದ ಹಲವೆಡೆ ವಿದ್ಯುತ್ ಕಡಿತ

ದೊಡ್ಡಬಳ್ಳಾಪುರ; ಇಂದಿನಿಂದ ಒಂದು ವಾರ ನಗರದ ಹಲವೆಡೆ ವಿದ್ಯುತ್ ಕಡಿತ

by Raghavendra H A
0 comments

ದೊಡ್ಡಬಳ್ಳಾಪುರ; ನಗರ ಮತ್ತು ತಾಲ್ಲೂಕಿನಾದ್ಯಂತ ಹಲವು ಪ್ರದೇಶಗಳಲ್ಲಿ ಒಂದು ವಾರಗಳ ಕಾಲ ವಿದ್ಯುತ್ ಅಡೆಚಣೆಯಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ.9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ನಗರದ ಗಣೇಶ್ ಗ್ರಾಂಡ್ ಹೋಟೆಲ್ ಹಿಂದೆ, ಕೆ.ಎಚ್.ಪಿ.ಎಲ್ ಕಾಂಪೌಂಡ್, ಆದಿತ್ಯ ಬಿರ್ಲಾ ಸಿಮೆಂಟ್ ಕಾರ್ಖಾನೆ, ಕೃಷ್ಣಧಾಮ ಹೋಟೆಲ್ ಹಿಂದೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮೇ.10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ, ಮಜರಾಹೊಸಹಳ್ಳಿ, ಚಿಕ್ಕತುಮಕೂರು, ಕಾಂತಿ ಸ್ವೀಟ್ಸ್ ಸರ್ಕಲ್, ಓಬದೇನಹಳ್ಳಿ ಕೈಗಾರಿಕಾ ಪ್ರದೇಶ, ಆದಿನಾರಾಯಣಹಳ್ಳಿ ಕೈಗಾರಿಕಾ ಪ್ರದೇಶ, ಫ್ಯಾಷನ್ ಕಾಲೇಜ್, ಲಘುನಾ, ಓಮ್ಯಾಮ್ ಸುತ್ತಮುತ್ತ ವಿದ್ಯುತ್ ಅಡಚಣೆ.

ಮೇ.12ರಂದು ಬೆಳಗ್ಗೆ  9ರಿಂದ ಮಧ್ಯಾಹ್ನ 2ರ ವರೆಗೆ ತಾಲ್ಲೂಕಿನ ಕುರುಬರಹಳ್ಳಿ, ರಾಜೀವ್‌ಗಾಂಧಿ ಬಡಾವಣೆ, ಮಾದಗೊಂಡನಹಳ್ಳಿ, ಕೋಳೂರು, ಹಸನ್‌ಘಟ್ಟ, ಇನ್ಫೋಸಿಟಿ-1 ಮತ್ತು 2, ರಾಶಿ ಲೇಟೌಟ್ ಸುತ್ತ ವಿದ್ಯುತ್ ಅಡಚಣೆ ಉಂಟಾಗಲಿದೆ.

ಮೇ.13ರಂದು ಬಾಶೆಟ್ಟಿಹಳ್ಳಿ ಪಟ್ಟಣ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮೇ.15ರಂದು ಬೆಳಗ್ಗೆ 9ರಿಂದ 2ರ ವರೆಗೆ ತಾಲ್ಲೂಕಿನ ಏಕಾಶಿಪುರ, ಅರಳುಮಲ್ಲಿಗೆ ಜಕ್ಕಸಂದ್ರ, ಪ್ರಕಾಶ್ ಲೇಔಟ್, ಹೊಸಹುಡ್ಯ, ಚಿಕ್ಕತುಮಕೂರು, ದೊಡ್ಡತುಮಕೂರು, ಜಿಂಕೆಬಚ್ಚಹಳ್ಳಿ ಸುತ್ತ ವಿದ್ಯುತ್ ಅಡಚಣೆ ಉಂಟಾಗಲಿದೆ.

You may also like

Leave a Comment