Wednesday, April 15, 2026
Home ಶಿಕ್ಷಣಕೂಲಿ ಕಾರ್ಮಿಕನ ಮಗಳು ದೀಪಿಕಾ ಗುಪ್ತ ಹೂಡಿ ಕಾಲೇಜಿಗೆ ಟಾಪರ್.

ಕೂಲಿ ಕಾರ್ಮಿಕನ ಮಗಳು ದೀಪಿಕಾ ಗುಪ್ತ ಹೂಡಿ ಕಾಲೇಜಿಗೆ ಟಾಪರ್.

by Dharmaraju
0 comments

ಮಹದೇವಪುರ: ಹೂಡಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ದೀಪಿಕಾ ಗುಪ್ತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 592 ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ತನ್ನ ಪರಿಶ್ರಮದಿಂದ ಈ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.

ದೀಪಿಕಾ ಗುಪ್ತ ಹೂಡಿ ಗ್ರಾಮದ ಸರೋಜಮ್ಮನವರ ಬಾಡಿಗೆ ಮನೆಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದು, ಅವರ ತಂದೆ ಕೂಲಿ ಕೆಲಸ ಮಾಡುತ್ತಿದ್ದು, ಕುಟುಂಬದ ಸವಾಲುಗಳ ನಡುವೆಯೂ ಅವರು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಈ ವರ್ಷ ಹೂಡಿ ಕಾಲೇಜಿನಿಂದ ಒಟ್ಟು 89 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 76 ಮಂದಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಫಲಿತಾಂಶ ಗಮನಾರ್ಹವಾಗಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಮತ್ತು ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, 16 ಮಂದಿ ವಿದ್ಯಾರ್ಥಿಗಳು 85 ಶೇಕಡಕ್ಕೂ ಹೆಚ್ಚು ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

You may also like

Leave a Comment