ಬೆಂಗಳೂರು: ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಹಿಂದೆಂದೂ ಬಾರದಂತಹ ಉತ್ತಮ ಫಲಿತಾಂಶ ಪ್ರಕಟವಾಗಿದೆ.ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಇಲಾಖೆಯ ವೆಬ್‌ಸೈಟ್ ( https://karresults.nic.in/ ) ನಲ್ಲಿಯೂ ಫಲಿತಾಂಶ ಲಭ್ಯವಿದೆ.
ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ರಷ್ಟು ಫಲಿತಾಂಶ ಪ್ರಕಟವಾಗಿದೆ. ಈ ಬಾರಿ 7,70,209 ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 7,24,794 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಒಟ್ಟಾರೆ ಶೇ.94.10 ರಷ್ಟು ಮಕ್ಕಳು ಪಾಸ್ ಆಗಿರೋದು ಇದೇ ಮೊದಲು.
ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಗಳಿಸಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಜಿಲ್ಲಾವಾರು ಫಲಿತಾಂಶದ ವಿವರ
ದಕ್ಷಿಣ ಕನ್ನಡ ಜಿಲ್ಲೆ- 98.40%
ಉಡುಪಿ – 98.18%
ಉತ್ತರ ಕನ್ನಡ- 98.09%
ಹಾಸನ- 97.51%
ಮಂಡ್ಯ- 97.45%
ಶಿರಸಿ- 97.21%
ಹಾವೇರಿ- 96.87%
ಕೊಡಗು- 96.70%
ಶಿವಮೊಗ್ಗ- 96.56%
ವಿಜಯನಗರ- 96.39%
ಬೆಂಗಳೂರು ಗ್ರಾಮಾಂತರ – 95.84%
ಧಾರವಾಡ – 95.59%
ಕೋಲಾರ- 95.50%
ಬಾಗಲಕೋಟೆ- 95.42%
ಬೆಂಗಳೂರು ಉತ್ತರ- 95.34%
ಗದಗ- 95.24%
ಚಿಕ್ಕಮಗಳೂರು- 94.99%
ಬೆಳಗಾವಿ – 94.75%
ದಾವಣಗೆರೆ- 94.64%
ಮೈಸೂರು- 94.50%
ರಾಯಚೂರು- 94.41%
ವಿಜಯಪುರ- 94.17%
ಚಿಕ್ಕೋಡಿ- 94.09%
ಬಳ್ಳಾರಿ- 93.36%
ಕೊಪ್ಪಳ- 93.10%
ರಾಮನಗರ- 92.83%
ಚಿತ್ರದುರ್ಗ- 92.25%
ಬೀದರ್- 92.18%
ತುಮಕೂರು- 92.04%
ಚಾಮರಾಜನಗರ- 91.89%
ಯಾದಗಿರಿ- 91.89%
ಬೆಂಗಳೂರು ದಕ್ಷಿಣ- 91.65%
ಚಿಕ್ಕಬಳ್ಳಾಪುರ- 90.88%
ಮಧುಗಿರಿ- 90.26%
ಕಲಬುರಗಿ-85.06%
ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ನಲ್ಲಿ ಅಥವಾ https://karresults.nic.in KarnatakaOne Mobile App ಮೂಲಕವೂ ಪಡೆಯಬಹುದು. ಅಲ್ಲದೇ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಯಪ್/ಎಸ್ಸೆಮ್ಮೆಸ್ (SMS) ಮೂಲಕವೂ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಈ ವರ್ಷ ಪ್ರಥಮ ಬಾರಿ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ ನಲ್ಲೂ ಅಪ್ಲೋಡ್ ಮಾಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು https://www.digilocker.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.