Tuesday, June 9, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ; ಹೊಸಹಳ್ಳಿ ಅರಣ್ಯಪ್ರದೇಶದಲ್ಲಿ ಬೆಂಕಿ, ಅನಾಹುತ ತಪ್ಪಿಸಿದ ಪೊಲೀಸರ ತಂಡ, ಸಮಯಪ್ರಜ್ಞೆಗೆ ಮೆಚ್ಚಿದ ಜನ

ದೊಡ್ಡಬಳ್ಳಾಪುರ; ಹೊಸಹಳ್ಳಿ ಅರಣ್ಯಪ್ರದೇಶದಲ್ಲಿ ಬೆಂಕಿ, ಅನಾಹುತ ತಪ್ಪಿಸಿದ ಪೊಲೀಸರ ತಂಡ, ಸಮಯಪ್ರಜ್ಞೆಗೆ ಮೆಚ್ಚಿದ ಜನ

by Raghavendra H A
0 comments

ದೊಡ್ಡಬಳ್ಳಾಪುರ; ಹೊಸಹಳ್ಳಿ ವ್ಯಾಪ್ತಿಯ ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿ ತಗುಲಿ ಸಂಭವಿಸಬಹುದಾದ ಭಾರಿ ಅನಾಹುತವನ್ನು ತಡೆಯುವಲ್ಲಿ ಹೊಸಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಮತ್ತು ತಂಡ ಯಶಸ್ವಿಯಾಗಿದೆ.

ತಾಲ್ಲೂಕಿನ ಹೊಸಹಳ್ಳಿವ್ಯಾಪ್ತಿಯಲ್ಲಿ ಇಂದು ಸಂಜೆ 5ಗಂಟೆ ಸುಮಾರಿನಲ್ಲಿ  ಇನ್ಸ್ ಪೆಕ್ಟರ್ ಅಮರೇಶ್ ಗೌಡ ಮತ್ತು ತಂಡ ಗಸ್ತು ತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಅರಣ್ಯದಲ್ಲಿ ಬೆಂಕಿ ತಗುಲಿರುವುದನ್ನು ಕಂಡು ಸ್ಥಳೀಯ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಮುಂದೆ ಆಗಬಹುದಾದ ಕಾಳ್ಗಿಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆದ ನಾರಾಯಣ ಸ್ವಾಮಿ, ಠಾಣಾ ಸಿಬ್ಬಂದಿ ಶ್ರೀಹರಿ ಮತ್ತು ಸ್ಥಳಿಯರಾದ ನಿತಿನ್ ಇದ್ದರು.

You may also like

Leave a Comment